Nonagenarian Sri B.V. Kakkilaya, well known as a leader of the Communist Party of India (CPI), a freedom fighter, a leader of the Karnataka unification movement, an award winning writer, a leader of the working class, a member of the Rajya Sabha and Karnataka State Assembly and as an orator was felicitated in a simple function at Bangalore on March 22, 2009. It was organised by the M.S. Krishnan Memorial Trust, Bangalore at the Senate Hall, Central College, Bangalore. A felicitation volume, titled Nirantara, comprising of articles about his life and work written by his close associates, lectures delivered at the ‘Kakkilaya 90: Dialogue with the new generation’ held in May last, lectures and articles written by Sri Kakkilaya etc., was presented to him on the occasion by veteran leader Sri M.C. Narasimhan. Sri BA Moidin, Subbayya Shetty and Dr. G. Ramakrishna spoke about the life and work of Sri Kakkilaya, Dr. Siddanagowda Patil, Secretary of Karnataka State CPI, was present. The programme was presided by Sri Ko. Chennabasappa.
ಹಿರಿಯ ಕಮ್ಯೂನಿಸ್ಟ್ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾಗಿ, ಪ್ರಶಸ್ತಿ ವಿಜೇತ ಚಿಂತನಶೀಲ ಬರಹಗಾರರಾಗಿ, ರೈತ-ಕಾರ್ಮಿಕರ ನಾಯಕರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ ಹಾಗೂ ಅತ್ಯುತ್ತಮ ಭಾಷಣಕಾರರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿರುವ ಶ್ರೀ ಬಿ.ವಿ. ಕಕ್ಕಿಲ್ಲಾಯರು ತೊಂಭತ್ತರ ಹರೆಯವನ್ನು ದಾಟಿದ ಸಂದರ್ಭದಲ್ಲಿ ಈ ಜ್ಞಾನವೃದ್ಧರಿಗೆ ಒಂದು ಸರಳವಾದ ಅಭಿನಂದನಾ ಸಮಾರಂಭವನ್ನು ಎಂ.ಎಸ್. ಕೃಷ್ಣನ್ ಸ್ಮರಣ ಸಂಸ್ಥೆಯ ಆಶ್ರಯದಲ್ಲಿ ಮಾರ್ಚ್ 22, ರವಿವಾರದಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಕ್ಕಿಲ್ಲಾಯರ ಜೀವನ ಮತ್ತು ಹೋರಾಟಗಳ ಬಗ್ಗೆ ಅವರ ಆಪ್ತರು ಬರೆದಿರುವ ಲೇಖನಗಳು, ಕಳೆದ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ‘ಕಕ್ಕಿಲ್ಲಾಯ – 90: ಹೊಸ ಪೀಳಿಗೆಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು, ಕಕ್ಕಿಲ್ಲಾಯರ ಕೆಲವು ಭಾಷಣಗಳು ಮತ್ತು ಪ್ರಮುಖ ಲೇಖನಗಳನ್ನೊಳಗೊಂಡ ‘ನಿರಂತರ’ ಎಂಬ ಅಭಿನಂದನಾ ಗ್ರಂಥವನ್ನು ಅವರ ಸಂಗಾತಿ, ಹಿರಿಯ ಕಾರ್ಮಿಕ ನಾಯಕರಾದ ಎಂ.ಸಿ. ನರಸಿಂಹನ್ ಅವರು ಕಕ್ಕಿಲ್ಲಾಯರಿಗೆ ನೀಡಿ ಗೌರವಿಸಿದರು. ಶ್ರೀಯುತರಾದ ಬಿ.ಎ. ಮೊಹಿದೀನ್, ಬಿ. ಸುಬ್ಬಯ್ಯ ಶೆಟ್ಟಿ ಹಾಗೂ ಡಾ| ಜಿ. ರಾಮಕೃಷ್ಣ ಅವರು ಕಕ್ಕಿಲ್ಲಾಯರ ಜೀವನ-ಸಾಧನೆಗಳ ಬಗ್ಗೆ ಮಾತಾಡಿದರು. ಡಾ| ಸಿದ್ಧನಗೌಡ ಪಾಟೀಲ್ ಮತ್ತಿತರ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೋ. ಚೆನ್ನಬಸಪ್ಪನವರು ವಹಿಸಿದ್ದರು. ಶ್ರೀ ಕಕ್ಕಿಲ್ಲಾಯರ ಸಂಗಾತಿಗಳು, ಬಂಧುಗಳು, ಮಿತ್ರರು ಹಾಗೂ ಅಭಿಮಾನಿಗಳಿಂದ ತುಂಬಿದ್ದ ಸಭಾಂಗಣದಲ್ಲಿ ಹಳೆಯ ದಿನಗಳ ಹೋರಾಟಗಳ ನೆನಪುಗಳು ಬಿಚ್ಚುತ್ತಿದ್ದಂತೆ ಇಂದಿನ ಸಮಸ್ಯೆಗಳನ್ನು ಎದುರಿಸಲು ಮತ್ತೊಮ್ಮೆ ಸಮರಶೀಲರಾಗಿ ದುಡಿಯಬೇಕಾದ ಅಗತ್ಯವು ನೆರೆದಿದ್ದವರಿಗೆಲ್ಲಾ ಮನಗಂಡಿರಬೇಕು.